
ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ಗೋವಾದ ಮಡಗಾಂವ್ ರೈಲ್ವೆ ನಿಲ್ದಾಣಕ್ಕೆ ಸೆಮಿ ಹೈಸ್ಪೀಡ್ ರೈಲು ಸೇವೆಯನ್ನು ಆರಂಭಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಈ ತಿಂಗಳ ಆರಂಭದಲ್ಲಿ ನೈಋತ್ಯ ರೈಲ್ವೆ, ದಕ್ಷಿಣ ರೈಲ್ವೆ ಮತ್ತು ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಜಂಟಿಯಾಗಿ ರೈಲ್ವೆ ಮಂಡಳಿಗೆ ಪ್ರಸ್ತಾವನೆಯನ್ನು ಸಲ್ಲಿಸಿವೆ.ಈ ಯೋಜನೆ ಅಪ್ರೂವ್ ಆದರೆ ಬೆಂಗಳೂರಿನಿಂದ ಗೋವಾಗೆ ವಂದೇ ಭಾರತ್ ರೈಲು ವಾರದಲ್ಲಿ ಆರು ದಿನಗಳು ಸಂಚಾರ ಮಾಡುವ ನಿರೀಕ್ಷೆ ಇದೆ. ಆದರೆ ಮಂಗಳೂರು ನಿಲ್ದಾಣಗಳನ್ನು ಬಿಟ್ಟು ಈ ಮಾರ್ಗವೂ ಇರಲಿದೆ. ಇದರೊಂದಿಗೆ ಕರ್ನಾಟಕದ ರಾಜಧಾನಿ ಹಾಗೂ ಗೋವಾ ರಾಜಧಾನಿ ನಡುವೆ ವೇಗದ ಸಂಪರ್ಕ ಸಾಧ್ಯವಾಗಲಿದೆ. ಆದರೆ ಭೂಪ್ರದೇಶಕ್ಕೆ ಸಂಬಂಧಿಸಿದ ನಿರ್ಬಂಧಗಳು ವಂದೇ ಭಾರತ ರೈಲಿನ ವೇಗಕ್ಕೆ ಸ್ವಲ್ಪ ಮಿತಿಯನ್ನು ಹಾಕುವ ನಿರೀಕ್ಷೆ ಇದೆ.ಈ ಯೋಜನೆ ಅಪ್ರೂವ್ ಆದರೆ ಬೆಂಗಳೂರಿನಿಂದ ಗೋವಾಗೆ ವಂದೇ ಭಾರತ್ ರೈಲು ವಾರದಲ್ಲಿ ಆರು ದಿನಗಳು ಸಂಚಾರ ಮಾಡುವ ನಿರೀಕ್ಷೆ ಇದೆ. ಆದರೆ ಮಂಗಳೂರು ನಿಲ್ದಾಣಗಳನ್ನು ಬಿಟ್ಟು ಈ ಮಾರ್ಗವೂ ಇರಲಿದೆ. ಇದರೊಂದಿಗೆ ಕರ್ನಾಟಕದ ರಾಜಧಾನಿ ಹಾಗೂ ಗೋವಾ ರಾಜಧಾನಿ ನಡುವೆ ವೇಗದ ಸಂಪರ್ಕ ಸಾಧ್ಯವಾಗಲಿದೆ. ಆದರೆ ಭೂಪ್ರದೇಶಕ್ಕೆ ಸಂಬಂಧಿಸಿದ ನಿರ್ಬಂಧಗಳು ವಂದೇ ಭಾರತ ರೈಲಿನ ವೇಗಕ್ಕೆ ಸ್ವಲ್ಪ ಮಿತಿಯನ್ನು ಹಾಕುವ ನಿರೀಕ್ಷೆ ಇದೆ.ಸದ್ಯ ಗೋವಾ ಮತ್ತು ಯಶವಂತಪುರದ ನಡುವೆ ವಾಸ್ಕೋ ಡಿ ಗಾಮಾ ಎಕ್ಸ್ ಪ್ರೆಸ್ ಟ್ರೈನ್ ಸಂಚಾರ ಮಾಡುತ್ತಿದ್ದು, ಇದು ಸುಮಾರು 15 ಗಂಟೆಗಳ ಅವಧಿಯನ್ನು ತೆಗೆದುಕೊಳ್ಳುತ್ತಿದೆ. ಪ್ರಮುಖವಾಗಿ ಈ ರೈಲು ಕೊಂಕಾಣ ಭಾಗದ ಘಾಟ್ ಪ್ರದೇಶದಲ್ಲಿ ಸಂಚಾರ ಮಾಡುವ ಸಂದರ್ಭದಲ್ಲಿ ವೇಗವನ್ನು ಕಡಿಮೆ ಮಾಡಿಕೊಳ್ಳುತ್ತಿದೆ. ಆದ್ದರಿಂದ ವಂದೇ ಭಾರತ್ ರೈಲಿನ ಪ್ರಯಾಣದ ಸಮಯವೂ ಕೂಡ 12 ಗಂಟೆಗಳಿಗಿಂತ ಹೆಚ್ಚು ತೆಗೆದುಕೊಳ್ಳುತ್ತಿದೆ.ಬೆಂಗಳೂರಿನಿಂದ ಗೋವಾಗೆ ವಂದೇ ಭಾರತ್ ಪ್ರಯಾಣದ ಸಮಯ ಮತ್ತು ಮಾರ್ಗಕ್ಕೆ ಬರುವುದಾದರೆ, ಸಂಜೆ 6:05ಕ್ಕೆ ಯಶವಂತಪುರದಿಂದ ಹೊರಡಲಿರುವ ಟ್ರೈನ್ ಸಂಜೆ 7:05ಕ್ಕೆ ಮಡಗಾಂವ್ ತಲುಪಲಿದೆ. 700 ಕಿಮೀ ಉದ್ಧದ ಈ ಜರ್ನಿಯನ್ನು 12 ಗಂಟೆಯಲ್ಲಿ ಪೂರ್ಣಗೊಳಿಸಲಿದೆ.ಸದ್ಯ ಸಲ್ಲಿಕೆಯಾಗಿರುವ ಪ್ರಸ್ತಾವನೆಯಲ್ಲಿ ಇರುವಂತೆ ಇದು ಕೆಲವೇ ಕೆಲವು ನಿಲ್ದಾಣಗಳಲ್ಲಿ ನಿಲ್ಲಲಿದೆ. ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಪಡೀಲ್ ನಲ್ಲಿ ಮಾತ್ರ ನಿಲ್ಲಲಿದೆ. ಏಕೆಂದರೆ ಈ ನಿಲ್ದಾಣಗಳಿರುವ ರೈಲು ಕಾರಿಡಾರ್ ಕೊಂಕಣ ಪ್ರದೇಶವನ್ನು ಪ್ರವೇಶಿಸುವ ಮೊದಲು ಪ್ರಮುಖ ಘಾಟ್ ಪ್ರದೇಶಗಳ ಮೂಲಕ ಹಾದುಹೋಗುತ್ತದೆ. ಈ ಘಾಟ್ ಗಳು ಕಡಿದಾದ ಇಳಿಜಾರುಗಳು ಮತ್ತು ತೀಕ್ಷ್ಣವಾದ ತಿರುವುಗಳಿಗೆ ಹೆಸರುವಾಸಿಯಾದ ಪ್ರದೇಶವಾಗಿದೆ.ವಂದೇ ಭಾರತ್ ಎಕ್ಸ್ ಪ್ರೆಸ್ ಆರಂಭವಾದರೂ ಈ ರೂಟ್ ನಲ್ಲಿ ಅದರ ವೇಗ ಕೇವಲ 50ಕಿಮೀ ಸರಾಸರಿ ವೇಗವನ್ನು ಹೊಂದಿರುತ್ತದೆ. ಯಶವಂತಪುರ-ವಾಸ್ಕೋ ಡಾ ಗಾಮಾ ಎಕ್ಸ್ ಪ್ರೆಸ್ ಸದ್ಯ ಈ ಮಾರ್ಗದಲ್ಲಿ ಸಂಚರಿಸಲು 15 ಗಂಟೆಗಳ ಅವಧಿಯನ್ನು ತೆಗೆದುಕೊಳ್ಳುತ್ತಿದೆ.ವಂದೇ ಭಾರತ್ ಎಕ್ಸ್ ಪ್ರೆಸ್ 160 ಕಿಮೀ ಕ್ಕಿಂತಲೂ ವೇಗವಾಗಿ ಸಂಚರಿಸುವ ಸಾಮರ್ಥ್ಯ ಹೊಂದಿದ್ದರೂ, ಈ ಮಾರ್ಗದಲ್ಲಿ ಕೊಂಕಣ ಕಾರಿಡಾರ್ ನಲ್ಲಿ ವಂದೇ ಭಾರತ್ ರೈಲು ತನ್ನ ವೇಗವನ್ನು ಕಡಿಮೆ ಮಾಡಿಕೊಳ್ಳಲೇಬೇಕಾಗಿದೆ. ಅದರಲ್ಲೂ ಕೆಲವು ಪ್ರದೇಶಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ವಂದೇ ಭಾರತ್ ರೈಲಿನ ವೇಗ 30ಕಿಮೀ ಗೆ ಕಡಿಮೆಯಾಗಲಿದೆ.ಪ್ರಸ್ತಾವನೆಯಲ್ಲಿ ಸಲ್ಲಿಕೆ ಆಗಿರುವಂತೆ ಬೆಳಗ್ಗೆ 6 ಗಂಟೆ ಬದಲಿಗೆ 6:30ಕ್ಕೆ ಆರಂಭಿಸಲು ರೈಲ್ವೆ ಮಂಡಳಿಯು ರೈಲ್ವೆ ವಲಯಗಳನ್ನು ಕೇಳಿದೆ. ಅಲ್ಲದೇ ಯಶವಂತಪುರ ರೈಲ್ವೆ ನಿಲ್ದಾಣದ ಬದಲು ಪ್ರಯಾಣಿಕರಿಗೆ ಅನುಕೂಲ ಆಗುವಂತೆ, ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ಸೇವೆ ಆರಂಭಿಸಲು ನೈಋತ್ಯ ರೈಲ್ವೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರಂತೆ. ಬೆಂಗಳೂರು ಮತ್ತು ಮಡಗಾಂವ್ (ಗೋವಾ) ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಸ್ತಾವನೆಯು ಪ್ರಸ್ತುತ ರೈಲ್ವೆ ಮಂಡಳಿಯ ಪರಿಗಣನೆಯಲ್ಲಿದೆ.
