
ಸಕಲೇಶಪುರ : ಆಟದಲ್ಲಿ ಸೋಲು ಗೆಲುವು ಮುಖ್ಯವಲ್ಲ ಕ್ರೀಡೆಯನ್ನು ಆನಂದಿಸುವದು ಮುಖ್ಯ ಎಂದು ಕಾರ್ಯಪಾಲಕ ಅಭಿಯಂತರ ಪ್ರಸನ್ನ ಹೇಳಿದರು.
ಪಟ್ಟಣದ ಸುಭಾಷ್ ಮೈದಾನದಲ್ಲಿ ಭಾನುವಾರ ಸೆಸ್ಕ್ ಮತ್ತು ಕೆ. ಪಿ. ಟಿ. ಸಿ. ಎಲ್ ನೌಕರರಿಗಾಗಿ ಆಯೋಜಿಸಲಾಗಿದ್ದ ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದ ನಂತರ ಮಾತನಾಡಿ ಒತ್ತಡದ ಬದುಕಿನಲ್ಲಿ ಇಂತಹ ಕ್ರೀಡಾಕೂಟಗಳು ನಮ್ಮ ನೌಕರರಿಗೆ ಮುಖ್ಯವಾಗಿದೆ. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ದೊರಕುತ್ತದೆ ಎಂದರು.
ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಪ್ರೇಮ್ ನಾಥ್ ಮಾತನಾಡಿ ಸೆಸ್ಕ್, ಕೆ. ಪಿ. ಟಿ. ಸಿ. ಎಲ್ ಸಿಬ್ಬಂದಿಗಳ ಜೊತೆ ಗುತ್ತಿಗೆದಾರರು ಸಹ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಇಂತಹ ಒಗ್ಗಟ್ಟು ನಮ್ಮ ತಾಲೂಕಿನಲ್ಲಿ ಮಾತ್ರ ಕಾಣಲು ಸಾಧ್ಯ ಎಂದರು.
ಸಕಲೇಶಪುರ ಸೆಸ್ಕ್ ಉಪ ವಿಭಾಗದ ಕ್ರಿಕೆಟ್ ಪಂದ್ಯಾವಳಿಯಲ್ಲಿ
ಒಟ್ಟು 7 ತಂಡಗಳು ಭಾಗವಹಿಸಿದ್ದು
ಕೆ. ಪಿ. ಟಿ. ಸಿ. ಎಲ್ ಹಾಗೂ ಯಸಳೂರು ತಂಡಗಳ ನಡುವೆ ಸೆಮಿಫೈನಲ್ ಪಂದ್ಯಾವಳಿ ನಡೆದು ಯಸಳೂರು ತಂಡ ಫೈನಲ್ ಗೆ ಪ್ರವೇಶಿಸಿದ್ದು,ಸಕಲೇಶಪುರ ಟೌನ್ ಹಾಗೂ ಹಾನುಬಾಳ್ ಸೆಸ್ಕ್ ತಂಡಗಳ ನಡುವೆ ಮತ್ತ್ತೊಂದು ಸೆಮಿಪೈನಲ್ ಪಂದ್ಯ ನಡೆದು ಹಾನುಬಾಳ್ ತಂಡ ಫೈನಲ್ ಗೆ ಪ್ರವೇಶ ಮಾಡಿತ್ತು. ಹಾನುಬಾಳ್ ಹಾಗೂ ಯಸಳೂರು ತಂಡಗಳ ನಡುವೆ ಅಂತಿಮ ಹಣಹಣಿ ನಡೆದು, ಹಾನುಬಾಳ್ ತಂಡ 4 ಓವರ್ ಗಳಿಗೆ 24 ರನ್ ಗಳಿಸಿದ್ದು ಇದನ್ನು ಯಸಳೂರು ತಂಡ ಸುಲಭವಾಗಿ ಬೆನ್ನಟ್ಟಿ ವಿಜಯಶೀಲವಾಯಿತು.
ಈ ಸಂದರ್ಭದಲ್ಲಿ ಬೆಂಗಳೂರಿನ ಅಭಿಯಂತರ ಚಲಪತಿ ರೆಡ್ಡಿ, ಸಕಲೇಶಪುರ ಎ. ಇ ನಿರಂಜನ್, ಅಶ್ರಫ್,ಯಸಳೂರು ವಿಭಾಗದ ಎ. ಇ ಅಮಿತ್,ನೌಕರರ ಕೇಂದ್ರ ಸಮಿತಿಯ ಸದಸ್ಯರಾದ ರಾಮಣ್ಣ,ನವಾಬ್ ಖಾನ್ ಸೆಸ್ಕ್ ಅಧಿಕಾರಿಗಳದ ಅಭಿ ಶರ್ಮ, ಪ್ರಕಾಶ್, ಪರಮೇಶ್ ಮಂಜುನಾಥ್,ರಂಗನಾಥ್ ಸೋಮಶೇಖರ್,ಚಂದ್ರು, ರಾಘವೇಂದ್ರ
ಸೇರಿದಂತೆ ಇತರರು ಹಾಜರಿದ್ದರು.
