





ಸಕಲೇಶಪುರ ತಾಲೂಕಿನ ಕುರುಬತ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಶುಕ್ರವಾರ ಸಂತೆ ಗ್ರಾಮದಲ್ಲಿರುವ ಸಂತೆ ಮೈದಾನದಲ್ಲಿ ಪ್ರತಿ ಶುಕ್ರವಾರ ಸಂತೆ ನಡೆಯುತ್ತಿದ್ದು, ಈ ಪ್ರದೇಶದಲ್ಲಿ ಸಂತೆ ಮುಗಿದ ನಂತರ ಕಸ ಕಡ್ಡಿ ಕರಗಿದ ತರಕಾರಿ ಇತರೆ ತ್ಯಾಜ್ಯ ವಸ್ತುಗಳು ಮೈದಾನದಲ್ಲಿ ಕೊಳೆಯುತ್ತಿದ್ದು, ಅದೇ ಸ್ಥಳಕ್ಕೆ ಕೆಲವರು ಕಸ ಕಡ್ಡಿಗಳನ್ನು ಹಾಕುತ್ತಿದ್ದು, ಕೇವಲ 100 ಮೀಟರ್ ದೂರದಲ್ಲಿ ಸಿದ್ದಗಂಗಾ ಪ್ರೌಢ ಶಾಲೆ ಇದ್ದು, ಅಕ್ಕ ಪಕ್ಕದಲ್ಲಿ ವಾಸದ ಮನೆಗಳು ಇವೆ ಸಾಂಕ್ರಾಮಿಕ ಹಾಗೂ ಇತರೆ ಕಾಯಿಲೆಗಳು ಹರಡುವ ಸಾಧ್ಯತೆ ಇರುವ ಕಾರಣ, ಪಂಚಾಯತಿಯ ವತಿಯಿಂದ ಕಸ ಕಡ್ಡಿ ತ್ಯಾಜ್ಯ ವಸ್ತುಗಳನ್ನು ಬೇರೆ ಕಡೆಗೆ ಸಾಗಿಸದೆ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿರುತ್ತಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರೈತ ಘಟಕ ಅಧ್ಯಕ್ಷರಾದ ವಸಂತ್ ಕುಮಾರ್ ಬೋಮ್ಮನಕೆರೆ ಆಗ್ರಹಿಸಿರುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದಲ್ಲಿ ಸಂತೆ ನಡೆಯುವ ದಿನದಂದೇ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿರುತ್ತಾರೆ,
ವಸಂತ್ ಕುಮಾರ್ ಬೊಮ್ಮನಕೆರೆ ಕ,ರ,ವೇ, ರೈತ ಘಟಕ ಅಧ್ಯಕ್ಷರು ಸಕಲೇಶಪುರ
