
ಸಕಲೇಶಪುರ :ವೀರಶೈವ ಲಿಂಗಾಯಿತ ಯುವ ಸೇನೆ ಸಕಲೇಶಪುರ ಇವರ ವತಿಯಿಂದ ಇಂದು ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಸಿದ್ದಗಂಗಾ ಶ್ರೀಗಳ 7ನೇ ವರ್ಷದ ಪುಣ್ಯ ಸ್ಮರಣೆಯ ಅನ್ನದಾಸೋಹ ಕಾರ್ಯಕ್ರಮಕ್ಕೆ ಶ್ರೀ ಮಠದ ಶ್ರೀಗಳಿಗೆ ಆಹ್ವಾನ ಮಾಡಲಾಯಿತು.
ಅದರಂತೆ ದಿನಾಂಕ: 09 /04/ 2026 ಗುರುವಾರದಂದು ಸಕಲೇಶಪುರದ ಗುರುವೇ ಗೌಡರ ಕಲ್ಯಾಣ ಮಂಟಪದಲ್ಲಿ ಶ್ರೀಗಳ ಏಳನೇ ವರ್ಷದ ಅನ್ನದಾಸೋಹ ಕಾರ್ಯಕ್ರಮಕ್ಕೆ ದಿನಾಂಕವನ್ನು ನಿಗದಿಪಡಿಸಿದರು.ಈ ಕಾರ್ಯಕ್ರಮಕ್ಕೆ ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ಆಗಮಿಸುವುದಾಗಿ ತಿಳಿಸಿದ್ದಾರೆ.
