
ಬೇಲೂರು: ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ, ಅರೇಹಳ್ಳಿ ಪೋಲೀಸ್ ಠಾಣೆ ವ್ಯಾಪ್ತಿ ಗೆ ಸೇರಿದ ಲಿಂಗಾಪುರ ಗ್ರಾಮದ ಬಸ್ಸು ನಿಲ್ದಾಣದಲ್ಲಿ ಇಬ್ಬರು ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. PSI ಶೋಭಾ ಹಾಗೂ ಸಿಬ್ಬಂದಿಗಳಾದ ಸುಪ್ರೀತ್, ಶಂಸುದ್ದೀನ್ , ಮಂಜುನಾಥ್. ಹಾಗೂ ದರ್ಶನ್ ಅವರ ನೇತೃತ್ವದಲ್ಲಿ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
