

ಹಾಸನ: ಸಕಲೇಶಪುರ ತಾಲೂಕು ಯಸಳೂರು ಹೋಬಳಿ ದಬ್ಬಳ್ಳಿ ಕಟ್ಟೆ ಅರಣ್ಯ ಪ್ರದೇಶದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ವೀರ ಮರಣವನ್ನಪ್ಪಿದ, ನಾಡಹಬ್ಬ ದಸರಾ ಗಜಪಡೆಯ ಚಿನ್ನದ ಅಂಬಾರಿ ಹೊತ್ತು ಸಾಗುತ್ತಿದ್ದ ಅರ್ಜುನನ ಭವ್ಯ ಸ್ಮಾರಕ ಕೊನೆಗೂ ಲೋಕಾರ್ಪಣೆಗೊಂಡಿದೆ. ಸುಮಾರು ಎರಡೂವರೆ ವರ್ಷದ ನಂತರ ಆತನ ಸಮಾಧಿ ಮೇಲೆಯೇ ಆಕರ್ಷಕ ಅರ್ಜುನನ ಮೂರ್ತಿಯನ್ನು ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಹಾಗೂ ಉಸ್ತುವಾರಿ ಸಚಿವರಾದ ಕೃಷ್ಣ ಭೈರೇಗೌಡ. ಮತ್ತು ಶಾಸಕರಾದ ಸಿಮೆಂಟ್ ಮಂಜು. ಶಾಸಕರಾದ ಶಿವಲಿಂಗೇಗೌಡ. ಹಾಗೂ ಜಿಲ್ಲಾಧಿಕಾರಿಗಳು ಉದ್ಘಾಟನೆ ಮಾಡಿದರು.
ಅರ್ಜುನನ ಸಮಾಧಿ ಜಾಗದಲ್ಲೇ ಆತನ ನೆನಪನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಫೈಬರ್ ಗ್ಲಾಸ್ ಬಳಸಿ 10 ಅಡಿ ಎತ್ತರ ಹಾಗೂ 13 ಅಡಿ ಉದ್ದದ ಈ ಭವ್ಯ ಮೂರ್ತಿಯನ್ನು ನಿರ್ಮಿಸಲಾಗಿದೆ. ಇದರ ಕೆತ್ತನೆಯ ಶಿಲ್ಪಿ ಧನಂಜಯ ಪಡುರವರು ಅರ್ಜುನನ ಮೂಲ ಸ್ವರೂಪವನ್ನೇ ಹೋಲುವಂತೆ ಈ ಸುಂದರ ಮೂರ್ತಿಯನ್ನು ನಿರ್ಮಿಸಲಾಗಿದೆ.
2023 ರ ಡಿಸೆಂಬರ್ 4 ರಂದು ದಬ್ಬಳ್ಳಿ ಕಟ್ಟೆ ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಈ ವೇಳೆ ಕಾಡಾನೆಯೊಂದಿಗೆ ಮುಖಾಮುಖಿಯಾಗಿ ನಡೆದ ಕಾಳಗದಲ್ಲಿ ಅರ್ಜುನ ಡಿಸೆಂಬರ್ 5 ರಂದು ಮೃತಪಟ್ಟ ಆ ಸ್ಥಳದಲ್ಲೇ ಅರಣ್ಯ ಇಲಾಖೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೇರವೇರಿಸಿತ್ತು.ಇದೀಗ ಅರ್ಜುನನ ಸ್ಮಾರಕ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.


ಈ ಸಂದರ್ಭದಲ್ಲಿ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ. ಹಾಸನ ಜಿಲ್ಲೆ ಉಸ್ತುವಾರಿ ಸಚಿವರಾದ ಕೃಷ್ಣ ಭೈರೇಗೌಡ. ಸಂಸದ ಶ್ರೇಯಸ್ ಪಟೇಲ್ ರವರು. ಜಿಲ್ಲಾಧಿಕಾರಿ ಲತಾ ಕುಮಾರಿ ರವರು. ಜಿಲ್ಲಾ ವರಿಷ್ಠಾಧಿಕಾರಿ ಶುಭನ್ವಿತಾ ರವರು. ಅರಸೀಕೆರೆ ಶಾಸಕ ಶಿವಲಿಂಗೇಗೌಡ ರವರು. ಸಕಲೇಶಪುರ ಶಾಸಕ ಸಿಮೆಂಟ್ ಮಂಜು ರವರು. CCF ಪಡುಕುಂಡಲ ರವರು. DCF ಸೌರಭ್ ಕುಮಾರ್ ರವರು. ಉಪಸ್ಥಿತರಿದ್ದರು.
