


ಸಕಲೇಶಪುರ ನಗರದ ಪುರಭವನದಲ್ಲಿ 2570ನೇ ವರ್ಷದ ಅಂಗವಾಗಿ ಬೌದ್ಧ ಸಮಾಜ ವತಿಯಿಂದ ಏರ್ಪಾಡಿಸಲಾಗಿದ್ದ ಬುದ್ಧ ಪೂರ್ಣಿಮಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮರ್ ಬೈಕೆರೆ ವಹಿಸಿದ್ದರು. ಉದ್ಘಾಟನೆಯನ್ನು ಬಂತೇಜಿ ಹಾಗೂ ಬಿಕ್ಕು ಸಂಘ ಮಹಬೋದಿ ಸೊಸೈಟಿ ಬೆಂಗಳೂರು ಉದ್ಘಾಟನೆಯನ್ನು ನೆರವೇರಿಸಿ ಕೊಟ್ಟರು.
ಈ ಸಂದರ್ಭದಲ್ಲಿ ಬುದ್ಧ ಪೂಜೆ,ದಮ್ಮ ಪ್ರವಚನ ಹಾಗೂ ದೀಕ್ಷಾ ಕಾರ್ಯಕ್ರಮ ನೆರವೇರಿಸಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಲೂರು, ಕಟ್ಟಾಯ, ಸಕಲೇಶಪುರ ವಿಧಾನ ಸಭಾ ಕ್ಷೆತ್ರದ
ಶಾಸಕರಾದ ಸಿಮೆಂಟ್ ಮಂಜುನಾಥ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಲ್ಲರಿಗೂ ಬುದ್ಧ ಪೂರ್ಣಿಮೆಯ ಅಂಗವಾಗಿ ಶುಭ ಕೋರಿ ಭಗವಾನ್ ಬುದ್ಧರ ಆದರ್ಶ ತತ್ವಗಳನ್ನು ಪ್ರತಿ ಯೊಬ್ಬರು ಆಳವಡಿಸಿ ಕೊಳ್ಳುವುದರಿಂದ ಉತ್ತಮ ಸಮಾಜ ನಿರ್ಮಾಣ ವಾಗುವುದಾಗಿ ತಿಳಿಸಿದರು. ಇದೆ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಹಿಂದುಳಿದ ವರ್ಗ ಅಭಿವೃದ್ಧಿ ಇಲಾಖೆ ಅಧಿಕಾರಿಗಳಾದ ಚಂದ್ರಶೇಖರ್, ಉಪಾಸಕರಾದ ರಮೇಶ್ ದೊಡ್ಡ ನಗರ, ದ್ಯಾವಪ್ಪ ಕೌಡಳ್ಳಿ, ಬೌದ್ಧ ಸಮಾಜ ಅಧ್ಯಕ್ಷರಾದ ಅಮರ್ ಬೈಕೆರೆ, ವಕೀಲರಾದ ವೇಣು, ಯೋಗೀಶ್ ಮಳಲಿ ಸೇರಿದಂತೆ ಬೌದ್ಧ ಕುಟುಂಬದ ಉಪಾಸಕರು ಉಪಾಸಕಿಯರು, ಭಗವಾನ್ ಬುದ್ಧರ ಅನುಯಾಯಿಗಳು ಇತರರು ಹಾಜರಿದ್ದರು.
