ಜಂಬೂದ್ವೀಪ ಬುದ್ಧ ವಿಹಾರ ಸಕಲೇಶಪುರ 2570 ನೇ ವರ್ಷದ  ಭಗವಾನ್ ಬುದ್ಧ ಪೂರ್ಣಿಮಾ ಕಾರ್ಯಕ್ರಮ ಹಾಗೂ ಭೋದಿ ಸಪ್ತಾಹ ಸಮಾರೋಪ ಸಮಾರಂಭ*

ಸಕಲೇಶಪುರ ದಿನಾಂಕ :1/5/2026 ರಂದು ಜಂಬೂದ್ವಿಪ ಬುದ್ಧ ವಿಹಾರದಲ್ಲಿ 2570 ನೇ ವರ್ಷದ  ಭಗವಾನ್ ಬುದ್ಧ ಪೂರ್ಣಿಮಾ ಕಾರ್ಯಕ್ರಮ ಹಾಗೂ ಭೋದಿ ಸಪ್ತಾಹ ಸಮಾರೋಪ ಸಮಾರಂಭ 

ಕಾರ್ಯಕ್ರಮದಲ್ಲಿ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್, ಭೋದಿ ವೃಕ್ಷ ಹಾಗೂ ಗೌತಮ ಬುದ್ಧರಿಗೆ ಭೋದಿ ವಂದನೆ ತ್ರಿಶರಣ ಪಂಚಾಶೀಲ ಹೇಳುವುದರ ಮೂಲಕ ಕಾರ್ಯಕ್ರಮವನ್ನು ಆರಂಬಿಸಲಾಯಿತು. 

ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರ ಧರ್ಮಪತ್ನಿ ಶ್ರೀಮತಿ ಪ್ರತಿಭಾ ಮಂಜುನಾಥ್ ಮಾಜಿ ಶಾಸಕರು ಹಾಗೂ ಮಾಜಿ ಸಚಿವರಾದ ಶ್ರೀಯುತ ಹೆಚ್ ಕೆ ಕುಮಾರಸ್ವಾಮಿ ಯವರು ಹಾಗೇಯೇ ಬೌದ್ಧ ಸಂಸ್ಥೆಯ ಅಧ್ಯಕ್ಷರಾದ  ಕೆ. ಬಿ ಚಂದ್ರಶೇಖರ್ ಉಪಾಧ್ಯಕ್ಷರಾದ ಮಹಿಷ್ ಕಾರ್ಯದರ್ಶಿಗಳಾದ  ಎನ್ ಈ ದೇವರಾಜ್ ಖಜಾಂಚಿಗಳಾದ  ಬಿ.ಬಿ  ಜಯವರ್ಧನ್ ದಮ್ಮಚಾರಿಗಳಾದ ಜಯಸೇನ್, ಹಾಗೇನೇ ರಾಜಶೇಖರ್ ದೊಡ್ಡನಾಗರ ನಲ್ಲುಲಿ  ಈರಪ್ಪ ಲಾಯರ್ ಮಂಜುನಾಥ್ ಸೇರಿ ದಂತೆ  ಭಾಗವಹಿಸಿದ್ದರು. 

ಈ ಒಂದು ಕಾರ್ಯಕ್ರಮದಲ್ಲಿ ಹಾಸನ ಸಕಲೇಶಪುರ ಬೇಲೂರು ಅರಕಲಗೋಡು ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ  ಉಪಾಸಕರು ಭಾಗವಹಿಸಿದ್ದರು. ಬೌದ್ಧ ಕುಟುಂಬದ ಅಕ್ಕ ಪಕ್ಕದ ಎಲ್ಲಾ ಉಪಾಸಕರು ಉಪಾಸಕಿಯರು  ಮಕ್ಕಳು ಮಾಧ್ಯಮದವರು ಪೊಲೀಸ್ ಇಲಾಖೆ ಸಿಬ್ಬಂದಿ ಯವರು ವಿವಿಧ ಇಲಾಖೆ ಯಲ್ಲಿ ಸೇವೆ ಸಲ್ಲಿಸುತಿರುವ ನೌಕರ ಬಾಂಧವರು ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.

Leave a Reply

Your email address will not be published. Required fields are marked *

error: Content is protected !!