ಜನವರಿ 16ರಂದು ಉಸ್ತುವಾರಿ ಸಚಿವರಿಂದ ಜನಸ್ಪಂದನಾ ಕಾರ್ಯಕ್ರಮ


ಸಕಲೇಶಪುರ: ಜ,14:
ಕಂದಾಯ ಸಚಿವ ಹಾಗೂ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡ ಜನವರಿ 16ರಂದು ಶುಕ್ರವಾರ ಪಟ್ಟಣಕ್ಕೆ ಆಗಮಿಸಿ ಜನಸ್ಪಂದನ ಕಾರ್ಯಕ್ರಮ ನಡೆಸಲಿದ್ದಾರೆ ಎಂದು ಗ್ಯಾರೆಂಟಿ ಯೋಜನೆಯ ಅಧ್ಯಕ್ಷ ಮುರಳಿಮೋಹನ್ ಅವರು  ತಿಳಿಸಿದರು.

ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ಮುಖ್ಯಮಂತ್ರಿ ನಿರ್ದೇಶನದ ಮೇರೆಗೆ ಪ್ರತಿ ತಾಲೂಕಿನಲ್ಲಿ ಜನಸ್ಪಂದನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಸಚಿವ ಕೃಷ್ಣ ಬೈರೇಗೌಡರು ಕಳೆದ ಕೆಲ ತಿಂಗಳಿನಲ್ಲಿ ಅಚ್ಚುಕಟ್ಟಾಗಿ ಸಾರ್ವಜನಿಕತೆಯ ಹಿತಕ್ಕಾಗಿ ಕಾರ್ಯನಿರ್ವಹಿಸಿ ಜನಮನ ಗೆದ್ದಿರುವ ಬಗ್ಗೆ ಶ್ಲಾಘಿಸಿದರು.

ತಾಲೂಕಿನ 26 ಗ್ರಾಮ ಪಂಚಾಯಿತಿಗಳು ಹಾಗೂ ಪುರಸಭೆ ವ್ಯಾಪ್ತಿಯ ಎಲ್ಲಾ ಅಧಿಕಾರಿಗಳಿಗೆ ಅಗತ್ಯ ದಾಖಲೆಗಳೊಂದಿಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಯಾವ ಕೆಲಸಗಳು ಬಾಕಿಯಿವೆ, ಸಾರ್ವಜನಿಕರಿಗೆ ಏನು ತುರ್ತು ಅಗತ್ಯವಿದೆ ಎಂಬುದನ್ನು ಗುರುತಿಸಿ ಸಚಿವರ ಸಮ್ಮುಖದಲ್ಲಿ ಪರಿಹಾರ ಸೂಚಿಸಲು ಅಧಿಕಾರಿಗಳು ಸಿದ್ಧರಾಗಬೇಕು ಎಂದು ಅವರು ತಿಳಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರ್‌ಮುಡಿ ಚಂದ್ರು ಅವರು, ಮೊದಲ ಬಾರಿಗೆ ಸಚಿವರು ಜನಸ್ಪಂದನಕ್ಕಾಗಿ ಬರುತ್ತಿರುವುದು ಜಿಲ್ಲೆಯ ಸಾರ್ವಜನಿಕರಿಗೆ ಸಂತೋಷದ ವಿಚಾರ. ಕಂದಾಯ ಇಲಾಕೆಯಲ್ಲಿ  ಖಾತಾ ತಿದ್ದುಪಡಿ ಸೇರಿದಂತೆ ಹಲವು ಅರ್ಜಿ ದಾಖಲೆ ಸರಾಗವಾಗಿ ನಡೆಯುತ್ತಿಲ್ಲ ಎಂಬುದು ಕಂಡುಬಂದಿದೆ. ಗ್ರಾಮಸ್ಥರು ತಮ್ಮ ಎಲ್ಲಾ ದಾಖಲೆಗಳನ್ನು ತ್ವರಿತವಾಗಿ ಕಾನೂನಿನ ಚೌಕಟ್ಟಿನಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಲು ಇದು ಸೂಕ್ತ ಅವಕಾಶ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ಮುಫೀಜ್,  ಸದಸ್ಯ ಬೈಕೆರೆ ದೇವರಾಜ್ ಹಾಗೂ ವೀರಶೈವ ಸಮಾಜದ ಮುಖಂಡ ಹಿತೇಶ್ ಇದ್ದರು.

ADVERTISEMENT

Leave a Reply

Your email address will not be published. Required fields are marked *

error: Content is protected !!