
ಸಕಲೇಶಪುರ :- ಪಟ್ಟಣದ ಹೆಚ್. ಡಿ. ಪಿ.ಎ ಸಭಾಂಗಣದಲ್ಲಿ ಹಾಸನ ಜಿಲ್ಲಾ ಪ್ಲಾಂಟರ್ ಸಂಘದ ಅಧ್ಯಕ್ಷರಾದ ಎ. ಎಸ್ ಪರಮೇಶ್ ಅವರು ವಳಲಹಳ್ಳಿ ಗ್ರಾಮಪಂಚಾಯಿತಿ ಬೆಳೆಗಾರರ ಸಂಘದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಮಾಡಿದರು.
ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಉಪಾಧ್ಯಕ್ಷರಾದ ಮಂಜುನಾಥ್ ಶೆಟ್ಟಿ, ಕಾರ್ಯದರ್ಶಿ ಕೆ. ಬಿ ಲೋಹಿತ್ ಕೌಡಳ್ಳಿ, ಖಜಾಂಚಿ ಎಂ.ಜೆ ಸಚಿನ್, ಜಂಟಿ ಕಾರ್ಯದರ್ಶಿ ಅರುಣ್ ಕುಮಾರ್,ಹೆತ್ತೂರು ಹೋಬಳಿ ಬೆಳೆಗಾರರ ಸಂಘದ ಕಾರ್ಯದರ್ಶಿ ಉದಯ್ ಗುಂಡಿಗೆರೆ, ಉಪಾಧ್ಯಕ್ಷರಾದ ಮಲ್ಲಪ್ಪ ಗೌಡ, ವಳಲಹಳ್ಳಿ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದ ಅಧ್ಯಕ್ಷರಾದ ವಿ. ಪಿ ವಿಶ್ವನಾಥ್, ಉಪಾಧ್ಯಕ್ಷರಾದ ರುದ್ರೇಶ್, ಕಾರ್ಯದರ್ಶಿ ಅರುಣ್ ಗೌಡ, ಖಜಾಂಚಿ ಹೂವಣ್ಣ ಗೌಡ, ಮಾಜಿ ಅಧ್ಯಕ್ಷರಾದ ದರ್ಶನ್ ಮರ್ಜನಹಳ್ಳಿ ಇದ್ದರು.
