ಜಂಬುದ್ವೀಪ ಬುದ್ಧ ವಿಹಾರ ದಲ್ಲಿ ಭಗವಾನ್ ಬುದ್ಧ ಜಯಂತಿ ಆಚರಣೆ, ಹಾಗೂ ಬೋಧಿ ಸಪ್ತಹ ಕಾರ್ಯಕ್ರಮ

ಸಕಲೇಶಪುರ : ನಗರದ ಹೊಸ ಬಸ್ ನಿಲ್ದಾಣ ಜಂಬುದ್ವೀಪ ಬುದ್ಧ ವಿಹಾರ ದಲ್ಲಿ 2570ನೇ ವರ್ಷದ ಭಗವಾನ್ ಬುದ್ಧ ಜಯಂತಿ ಆಚರಣೆ, ಹಾಗೂ ಬೋಧಿ ಸಪ್ತಹ ಕಾರ್ಯಕ್ರಮದ ಅಂಗವಾಗಿ ಶಾಂಚಿ ಮಹದ್ವಾರ, ನವೀಕರಣಗೊಂಡ ಬುದ್ಧ ವಿಹಾರ, ಹಾಗೂ ಬೋಧಿ ಸಾಪ್ತಾಹ ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರದ ಮಾನ್ಯ ಸಿಮೆಂಟ್ ಮಂಜುನಾಥ್ ರವರು ಉದ್ಘಾಟಿಸಿ ಎಲ್ಲರಿಗೂ ಶುಭ ಹಾರೈಸಿದರು. ಈ ಕಾರ್ಯಕ್ರಮಕ್ಕೆ ಸಕಲೇಶಪುರ ಆಲೂರು, ಕಟ್ಟಾಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶ್ರೀ ಮುರಳಿ ಮೋಹನ್ ಭಾಗಿಯಾಗಿ ಭಗವಾನ್ ಬುದ್ಧ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಭಗವನ್ ಬುದ್ಧರ ಆದರ್ಶ ತತ್ವ ವನ್ನು ಎಲ್ಲರೂ ಮೈಗೂಡಿಸಿಕೊಂಡು ಬಾಬಾ ಸಾಹೇಬ್ ಅಂಬೇಡ್ಕರ್ ತೋರಿದ ಮಾರ್ಗದಲ್ಲಿ ಉತ್ತಮ ಜೀವನ ರೂಪಿಸಿಕೊಂಡು ಬದುಕುವ ಬಗ್ಗೆ ತಿಳಿಸಿ ಎಲ್ಲರಿಗೂ ಶುಭ ಕೋರಿದರು. ಈ ಕಾರ್ಯಕ್ರಮದಲ್ಲಿ ಮಾತಾಜಿ ಸಾರನಾಥ ಬುದ್ಧ ವಿಹಾರ ಅಂತರ ಸಂತೆ ಹೆಚ್‍ಡಿ ಕೋಟೆ, ಬಿಕ್ಕುಣಿ ಗೌತಮಿ ಸಾನಿಧ್ಯದಲ್ಲಿ ಬುದ್ಧ ವಂದನೆ, ಧಮ್ಮ ಪ್ರವಚನ, ಮಾಡಲಾಯಿತು. ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು, ಈ ಕಾರ್ಯಕ್ರಮದಲ್ಲಿ ಭೌದ ಮೈತ್ರಿ ಬಳಗದ ಅಧ್ಯಕ್ಷರಾದ ಚಂದ್ರಶೇಖರ್ ಕೆಬಿ, ಕಾರ್ಯದರ್ಶಿ ದೇವರಾಜ್ ಎನ್ಇ, ಖಜಂಚಿ ಜಯ ವರ್ಧನ್, ಜಯಸೆನ್, ನಿವೃತ್ತ ಶಿಕ್ಷಕರಾದ ಲಕ್ಕಪ್ಪ,ವೆಂಕಟೇಶ್ ಬೈಕೆರೆ, ಗಿರೀಶ್ ಕಲ್ಗಣೆ ಸೇರಿದಂತೆ ಸುತ್ತಮುತ್ತಲ ಗ್ರಾಮದ ಬೌದ್ಧ ಕುಟುಂಬ ಸದಸ್ಯರು, ಬೌದ್ಧ ಮೈತ್ರಿ ಬಳಗದ ಎಲ್ಲ ಸದಸ್ಯರು ಹಾಜರಿದ್ದರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕುಮಾರ್ ವಾಟಳ್ಳಿ

Leave a Reply

Your email address will not be published. Required fields are marked *

error: Content is protected !!